Skip to main content

ಕಾಯಕವೇ ಕೈಲಾಸ

ಶಿವಶಂಕರ್. ಏ. ಜೆ. ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ಯಡೂರು


ಎಳೆ ವಯಸಿನ ಉಸಿರಿದು ಬಿಸಿ
ತಿಳಿ ಮನಸಿನ ಕನಸಿದು ಹಸಿ
ಮೊದಲನೇ ಸಲ ಮಿಲನದ ಖುಷಿ
ಬಯಕೆ ಮಳೆ ಜೋರಾಗಿ ಧಾವಿಸಿ
ಎದೆಯೊಳಗಡೆ ಹೊಸ ಕಸಿವಿಸಿ
ಹೃದಯದ ಜೊತೆ ಹೃದಯವ ಬೆಸಿ
ನಾಚಿಕೆಯನು ಆಚೆಗೆ ಎಸಿ
ಪಯಣದಲಿ ಪ್ರಣಯಾನ ಸೇರಿಸಿ
ಮೊಗ್ಗೊಂದು ಹಿಗ್ಗುತಲಿ ಹೂವಾಗೋ ಸಮಯ
ಮಿಂಚೊಂದು ಸಂಚರಿಸಿ ಮೈಯ್ಯಲ್ಲ ಸಿಹಿಯಾದ ಗಾಯ
ಎಳೆ ವಯಸಿನ ಉಸಿರಿದು ಬಿಸಿ
ತಿಳಿ ಮನಸಿನ ಕನಸಿದು ಹಸಿ
ಮೊದಲನೇ ಸಲ ಮಿಲನದ ಖುಷಿ
ಬಯಕೆ ಮಳೆ ಜೋರಾಗಿ ಧಾವಿಸಿ
ಯಾವ ಗುರುಕುಲವು ಗುರು ನೆರವು ಇರದೇ ಹಾಗೇನೆ
ಬೇಗ ಕಲಿತು ಬಿಡೋ ವಿಷಯವು ಈ ಒಲವೊಂದೇನೆ
ನಾಚಿ ನಯನಗಳು ಇದೆ ಮೊದಲು ಕೆಂಪಾಯ್ತು ಕೆನ್ನೆ
ಆಸೆ ಅರಳುತಲಿ ಕೆಣಕುತಿದೆ ಹೊಣೆಯು ನೀನೆ
ಕಂಡಂತ ಕನಸುಗಳು ನನಸಾಗುವ ಸಮಯ
ಓಡುತಿದೆ ಜೋರಾಗಿ ಹುಚ್ಚು ಕುದುರೆ ಏರಿ ಪ್ರಾಯ
ತೀರ ಹೊಸದಾದ ಜಗದಲ್ಲಿ ವಿಹರಿಸುತ ಜೀವ
ಮೋಜು ಅನುಭವಿಸಿ ಮರೆಯುತಿದೆ ಎಲ್ಲ ನೋವ
ಜೇನು ತುಂಬಿರುವ ಜಾತ್ರೆಯಲಿ ಕಳೆದೋದ ಭಾವ
ಮೋಹ ಅತಿಯಾಗಿ ಕಲಿತಿರುವೆ ಪ್ರೀತಿ ಪರ್ವ
ಧರೆಗಾದ ದಾಹವನು ನೀಗಿಸಿದೆ ಮುಗಿಲು
ಮರುಭೂಮಿ ನಿನ್ನಿಂದ ಆಗಿದೆ ಇಂದು ನೀನೆ ಕಡಲು
ಎದೆಯೊಳಗಡೆ ಹೊಸ ಕಸಿವಿಸಿ
ಹೃದಯದ ಜೊತೆ ಹೃದಯವ ಬೆಸಿ
ನಾಚಿಕೆಯನು ಆಚೆಗೆ ಎಸಿ
ಪಯಣದಲಿ ಪ್ರಣಾಯಾನ ಸೇರಿಸಿ

Kanninalli kannanittu nodabaaradhe
Gundigeya guudu bicchi heelabaaradhe
Kanninalli kannanittu nodabaaradhe
Gundigeya guudu bicchi heelabaaradhe
Manasu keeluva nuuru aasege
Beeli haakabahudhu
Hrudhaya haaduva usira laalige
Yaava beeli iradhu.
kanninalli kannanittu nodabaaradhe
Gundigeya guudu bicchi heelabaaradhe
Hosadhaagi shuruvayitha
Nammolage E gelethana
Nennegala nenapilladhe
Haaduvudhe nenapu dhina
Marevenendharu neeneega
Mareyalaagadhu Aa nova
Novvu edhe olage bacchittu
Laabhaveenidhe Oo jeeva
Hrudhayadha maathanu omme keelabaaradhe
Kanninalli kannanittu nodabaaradhe
Gundigeya guudu bicchi heelabaaradhe

Baaneero Aa moodavu
Haniyaagi dharegiliyadhe
Ee hrudhaya chuuraadharu
Ninna hesara adhu marevudhe
Dhikke illadha dhaariili
Rekke illadha Ee payana
Naanaa ruupadha thiruvalli
Yellu kaanadhu nildhaana
Moralaguuda kadhaduvaase
Innu thiiralillave
Kanninalli kannanittu nodabaaradhe
Gundigeya guudu bicchi heelabaaradhe
Kanninalli kannanittu nodabaaradhe
Gundigeya guudu bicchi heelabaaradhe
Eredu manasalu ondhe maathidhe
Yaake maguva munisu
Naanu neenu ibbaru endhare
Nambuvudhe Ee manasu.

ಬಾರೇ ಗೋಪಮ್ಮ ನಿಮ್ಮ ಬಾಲಯ್ಯನಳುತಾನೆ, ಬಾರೇ ಗೋಪಮ್ಮ ||ಪ||
ಆರು ತೂಗಿದರು ಮಲಗನು ಮುರವೈರಿ, ಬಾರೇ ಗೋಪಮ್ಮ ||ಅ||

ನೀರೊಳು ಮುಳುಗಿ ಮೈ ಒರೆಸೆಂದಳುತಾನೆ, ಬಾರೇ ಗೋಪಮ್ಮ
ಮೇರುವ ಹೊತ್ತು ಮೈ ಭಾರವೆಂದಳುತಾನೆ, ಬಾರೇ ಗೋಪಮ್ಮ ||1||

ಧರಣಿ ಕೋರೆಯಲಿಟ್ಟು ದವಡೆ ನೊಂದಳುತಾನೆ, ಬಾರೇ ಗೋಪಮ್ಮ
ದುರುಳ ರಕ್ಕಸನ ಕರುಳ ಕಂಡಳುತಾನೆ, ಬಾರೇ ಗೋಪಮ್ಮ ||2||

ನೆಲನನಳೆದು ಪುಟ್ಟ ಬೆರಳು ನೊಂದಳುತಾನೆ, ಬಾರೇ ಗೋಪಮ್ಮ
ಛಲದಿಂದ ಕೊಡಲಿಯ ಪಿಡಿದೆಂದಳುತಾನೆ, ಬಾರೇ ಗೋಪಮ್ಮ ||3||

ಬಲು ಸೈನ್ಯ ಕಪಿಗಳ ನೋಡೆನೆಂದಳುತಾನೆ, ಬಾರೇ ಗೋಪಮ್ಮ
ನೆಲುವಿನ ಬೆಣ್ಣೆಯು ನಿಲುಕದೆಂದೆಳುತಾನೆ, ಬಾರೇ ಗೋಪಮ್ಮ ||4||

ಬತ್ತಲೆ ನಿಂತವರ ಎತ್ತಿ ಕೊಳ್ಳೆಂದಳುತಾನೆ, ಬಾರೇ ಗೋಪಮ್ಮ
ಉತ್ತಮ ತೇಜಿಯ ಹತ್ತೇನೆಂದಳುತಾನೆ ಗೋಪ್ಯಮ್ಮ ||5||

ತೊಟ್ಟಿಲೊಳಗೆ ಮಲಗಲೊಲ್ಲನು ಮುರವೈರಿ, ಬಾರೇ ಗೋಪಮ್ಮ
ದಿಟ್ಟ ಶ್ರೀ ಪುರಂದರವಿಠಲಕೆ ಮೊಲೆ ಕೊಡು, ಬಾರೇ ಗೋಪಮ್ಮ ||6||




Comments

Popular posts from this blog

ನನ್ನ ಕೆಲವು ಫೋಟೋಗಳು

ಭಾವಗೀತೆಗಳು

ಕನ್ನಡದ ಭಾವಗೀತೆಗಳ ಸಂಗ್ರಹ ಭಕ್ತಿಗೀತೆಗಳು ಪೊಗದಿರಲೋ ರಂಗ ಬಾಗಿಲಿಂದಾಚೆಗೆ • ಪುರಂದರ ದಾಸರು ಪೊಗದಿರಲೋ ರಂಗ ಬಾಗಿಲಿಂದಾಚೆಗೆ || ಪ || ಭಾಗವತರು ಕಂಡರೆತ್ತಿಕೊಂಬರೊ ನಿನ್ನ || ಅ.ಪ. || ಸುರಮುನಿಗಳು ತಮ್ಮ ಹೃದಯಗಹ್ವರದಲ್ಲಿ ಪರಮಾತ್ಮನ ಕಾಣದರಸುವರೋ ದೊರಕದ ವಸ್ತುವು ದೊರಕಿತು ತಮಗೆಂದು ಹರುಷದಲಿ ಬಂದು ಕರೆದೆತ್ತಿ ಕೊಂಬರೋ || ೧ || ಅಗಣಿತ ಗುಣ ನಿನ್ನ ಜಗದ ನಾರಿಯರೆಲ್ಲ ಪಗೆಯಾಗಿ ಕಾಂಬರೊ ಗೋಪಾಲನೇ ಮಗುಗಳ ಮಾಣಿಕ್ಯ ತಗುಲಿತು ಕರೆಕೆಂದು ಬೇಗದಲಿ ಬಂದು ಬಿಗಿದಪ್ಪಿ ಕೊಂಬರೋ || ೨ || ದುಷ್ಟನಾರಿಯರು ತಮ್ಮಿಷ್ಟವ ಸಲ್ಲಿಸೆಂದು ಅಟ್ಟಿ ಬೆನ್ನಹಿಂದೆ ತಿರುಗುವರೋ ಸೃಷ್ಟೀಶ ಪುರಂದರ ವಿಠಲ ರಾಯನೆ ಇಷ್ಟಿಷ್ಟು ಬೆಣ್ಣೆಯ ಕೊಡುವೆನು ಗೋಪಾಲ || ೩ || ಜಗದೋದ್ಧಾರನ • ಪುರಂದರ ದಾಸರು ಜಗದೋದ್ಧಾರನ ಆಡಿಸಿದಳ್ ಯಶೋದಾ || ಪ || ಜಗದೋದ್ಧಾರನ ಮಗನೆಂದು ತಿಳಿಯುತ ಸುಗುಣಾಂತ ರಂಗನ ಆಡಿಸಿದಳ್ ಯಶೋದಾ || ಅ.ಪ || ನಿಗಮಕೆ ಸಿಲುಕದ ಅಗಣಿತ ಮಹಿಮನ ಮಗುಗಳ ಮಾಣಿಕ್ಯನ ಆಡಿಸಿದಳ್ ಯಶೋದಾ || ೧ || ಅಣೋರಣೀಯನಾ ಮಹತೋಮಹಿಮನಾ ಅಪ್ರಮೇಯನಾ ಆದಿಸಿದಳ್ ಯಶೋದಾ || ೨ || ಪರಮ ಪುರುಷನಾ ಪರವಾಸುದೇವನ ಪುರಂದರ ವಿಠಲನಾ ಆಡಿಸಿದಳ್ ಯಶೋದಾ || ೩ ತಲ್ಲಣಿಸದಿರು ಕಂಡ್ಯ • ಕನಕದಾಸರು ತಲ್ಲಣಿಸದಿರು ಕಂಡ್ಯ ತಾಳು ಮನವೆ || ಪ || ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ || ಅ.ಪ. || ಬೆಟ್ಟದಾ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆ ಕಟ್ಟೆಯನು ಕಟ್ಟಿ ನೀರೆರೆದವರು ಯಾರ...